Description : ಪುತ್ತೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಇಲ್ಲದೆ ಬದುಕಲು ಅಸಾಧ್ಯ. ಮಾಧ್ಯಮವಾಗಿ ಇಂಗ್ಲಿಷ್ ಅತೀ ಅಗತ್ಯವಾಗಿದೆ. ಹೆಚ್ಚೆಚ್ಚು ಪುಸ್ತಕಗಳನ್ನು ಓದುವುದು ಜ್ಞಾನ ಭಂಡಾರವನ್ನು ವೃದ್ಧಿಸಲು ಸಹಕಾರಿಯಾಗಿದೆ. ಓದುವುದು, ಬರೆಯುವುದು, ಕೇಳುವುದು ಮತ್ತು ಮಾತನಾಡುವುದು ಈ ನಾಲ್ಕು ಅಂಶಗಳನ್ನು ಜೀವನದಲ್ಲಿ ಅಳವಡಿಸುವುದರಿಂದ ಭಾಷಾ ಕೌಶಲ್ಯವು ಅಭಿವೃದ್ಧಿಯಾಗುತ್ತದೆ ಎಂದು ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಸುಚಿತ್ರ ಪ್ರಭು ಹೇಳಿದರು.
ಅವರು ನಗರದ ನಟ್ಟೋಜ ಪೌಂಢೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗ ಹಾಗೂ ಐಕ್ಯೂಎಸಿ ವಿಭಾಗದ ಆಶ್ರಯದಲ್ಲಿ ಮಂಗಳವಾರದAದು ಇಂಗ್ಲಿಷ್ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಬರವಣೆಗೆಯಲ್ಲಿ ಹಿಡಿತ ಸಾಧಿಸಲು ದಿನಂಪ್ರತಿ ದಿನಚರಿಯನ್ನು ಬರೆಯುವ ಹವ್ಯಾಸವನ್ನು ಬೆಳೆಸಬೇಕು. ಕ್ರಮೇಣ ಇತರ ವಿಧದ ಬರವಣೆಗೆಯನ್ನು ಪ್ರಯತ್ನಿಸಬೇಕು. ಮಾದರಿಯಾಗಿ ಪ್ರಸಿದ್ಧರ ಶೈಲಿಯನ್ನು ಗಮನಿಸಬಹುದು ಆದರೆ ಅದನ್ನೇ ಪಡಿಯಚ್ಚು ಮಾಡಬಾರದು. ನಾವು ನಾವಾಗಿದ್ದು, ನಮ್ಮದೇ ಸೃಜನಶೀಲತೆಯಿಂದ ಬೆಳೆಯಬೇಕು ಎಂದರು.
ಪ್ರಸ್ಥಾವನೆಗೈದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ ಮಾತನಾಡಿ ಇಂಗ್ಲಿಷ್ ಸಾಹಿತ್ಯ ವೇದಿಕೆ ವಿದ್ಯಾರ್ಥಿಗಳ ಸೃಜನಶೀಲ ಅಭಿವ್ಯಕ್ತಿಗಳಿಗೆ ಅವಕಾಶ ನೀಡಲಿದೆ. ಇಂಗ್ಲಿಷ್ ಎಂದಾಕ್ಷಣ ಭಯಪಡಬೇಕಿಲ್ಲ. ಒಬ್ಬ ವಿದ್ಯಾರ್ಥಿ ನಿರ್ಭಯವಾಗಿ ಇಂಗ್ಲಿಷ್ನಲ್ಲಿ ವ್ಯವಹರಿಸುವುದಕ್ಕೆ ವೇದಿಕೆ ಸಹಕಾರ ನೀಡಲಿದೆ. ವಿದ್ಯಾರ್ಥಿಗಳು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ವ್ಯವಸ್ಥೆಯ ಯಶಸ್ಸು ಅಡಗಿದೆ ಎಮದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾAತ ಗೋರೆ ಮಾತನಾಡಿ ಸಾಹಿತ್ಯದ ಓದುವಿಕೆ, ಬರವಣಿಗೆಯು ಒತ್ತಡವನ್ನು ಕಡಿಮೆಗೊಳಿಸುತ್ತದೆ. ಮಾನಸಿಕ ನೆಮ್ಮದಿಯನ್ನು ಪಡೆಯಲು ಸಾಹಿತ್ಯಿಕ ಚಟುವಟಿಕೆಗಳನ್ನು ರೂಢಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ ಕುಮಾರ್ ಕಮ್ಮಜೆ, ತತ್ತ÷್ವಶಾಸ್ತç ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ, ಭೌತಶಾಸ್ತç ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್, ಗಣಿತಶಾಸ್ತç ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ, ಕನ್ನಡ ಉಪನ್ಯಾಸಕರಾದ ಜಯಂತಿ ಹಾಗೂ ಗಿರೀಶ್ ಭಟ್ ಕೂವೆತ್ತಂಡ, ಇಂಗ್ಲಿಷ್ ಉಪನ್ಯಾಸಕಿ ಸಂಧ್ಯಾ ಎಂ ಉಪಸ್ಥಿತರಿದ್ದರು.
ಕಾಲೇಜಿನ ಇಂಗ್ಲಿಷ್ ಸಾಹಿತ್ಯ ವೇದಿಕೆಯ ವಿದ್ಯಾರ್ಥಿ ಕಾರ್ಯದರ್ಶಿ ಮನೀಷ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಂಚಮಿ ಪ್ರಾರ್ಥಿಸಿ, ವಿದ್ಯಾರ್ಥಿನಿ ಅನಘಾ ಸ್ವಾಗತಿಸಿದರು. ವಿದ್ಯಾರ್ಥಿನಿ ಮೇಘಾ ವಂದಿಸಿ, ವಿದ್ಯಾರ್ಥಿನಿ ನಯನ ಕಾರ್ಯಕ್ರಮ ನಿರೂಪಿಸಿದರು.